ಆತ್ಮಹತ್ಯೆಯು ಒಂದು ಕ್ಲಿಷ್ಟಕರ ವಿಷಯವಾಗಿದ್ದು ನಾವು ಅದರ ಬಗ್ಗೆ ಮಾತನಾಡಬೇಕು. ವಯಸ್ಕರಂತೆ, ಹದಿಹರೆಯದವರು ಈ ಭೀಕರ ವಿದ್ಯಮಾನಕ್ಕೆ ಒಳಗಾಗಬಹುದು. ಹದಿಹರೆಯದವರ ಜೀವನದಲ್ಲಿ ಪೋಷಕರು, ಪಾಲಕರು, ಶಿಕ್ಷಕರು ಮತ್ತು ಇತರ ವಿಶ್ವಾಸಾರ್ಹ ವ್ಯಕ್ತಿಗಳು ಆತ್ಮಹತ್ಯೆಗೆ ಸಂಬಂಧಿಸಿದ ಆಲೋಚನೆಗಳು, ಭಾವನೆಗಳು ಅಥವಾ ನಡವಳಿಕೆಗಳ ಚಿಹ್ನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಮುಖ ಪಾತ್ರ ವಹಿಸುತ್ತಾರೆ.
ಹದಿಹರೆಯದವರೊಂದಿಗೆ ಆತ್ಮಹತ್ಯೆಯ ಕುರಿತು ಮಾತನಾಡುವಾಗ ಸಹಾಯಕವಾಗುವ ಭಾಷೆ
ಈ ಸಮಸ್ಯೆಯ ಕುರಿತು ನಿಮ್ಮ ಹದಿಹರೆಯದವರೊಂದಿಗೆ ಮಾತನಾಡುವುದು ಸುಲಭವಲ್ಲ, ಆದರೆ ನೀವು ಆ ಸಂಭಾಷಣೆಯನ್ನು ನಡೆಸುವಾಗ (ಅಥವಾ ಅವರು ಅದರ ಕುರಿತು ಮಾತನಾಡಿದರೆ), ಅದರಿಂದ ಹಿಂದೆ ಸರಿಯಬೇಡಿ.
ಯಾವಾಗಲೂ ಸಹಾಯವಾಗುವ ರೀತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸುವತ್ತ ಕಾಳಜಿ ವಹಿಸಿ. ನೀವು ಭಾಷೆ ಮತ್ತು ಸಂದರ್ಭವನ್ನು ಹೇಗೆ ಬಳಸಿಕೊಳ್ಳುತ್ತಿದ್ದೀರಿ ಎಂಬುದರ ಬಗ್ಗೆ ಹೆಚ್ಚು ಗಮನಹರಿಸಿ. ನೀವು ಆಯ್ಕೆ ಮಾಡುವ ಪದಗಳು ಸಂಭಾಷಣೆಯ ಮೇಲೆ ಆಳವಾದ ರೀತಿಯಲ್ಲಿ ಪರಿಣಾಮ ಬೀರಬಹುದು. ನಿಮ್ಮ ಸಂಭಾಷಣೆಯ ಪ್ರಾರಂಭದಲ್ಲಿ ಭರವಸೆ, ಚೇತರಿಕೆ ಮತ್ತು ಸಹಾಯ-ಅಪೇಕ್ಷೆಯ ಸ್ಟೋರೀಸ್ ಅನ್ನು ಇರಿಸಿ. ಅವರು ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಆರಾಮದಾಯಕವಾದ ಸ್ಪೇಸ್ ಅನ್ನು ರಚಿಸಿ. ನೀವು ಅವರನ್ನು ಪ್ರೀತಿಸುತ್ತೀರಿ ಮತ್ತು ಸಹಾಯವು ಯಾವಾಗಲೂ ಲಭ್ಯವಿರುತ್ತದೆ ಎಂಬುದಾಗಿ ಅವರಿಗೆ ತಿಳಿಸಿ.
ನಮ್ಮ ಪಾಲುದಾರರಾದ Orygen - ಯುವಜನರಿಗೆ ಮಾನಸಿಕ ಆರೋಗ್ಯ ಸೇವೆಗಳ ಮೇಲೆ ಕೇಂದ್ರೀಕೃತ ಸಂಸ್ಥೆ - ಮಾರ್ಗದರ್ಶಿಯಿಂದ ಸಹಾಯಕವಾದ ಭಾಷೆಯ ಕೆಲವು ಉದಾಹರಣೆಗಳನ್ನು ಕೆಳಗೆ ನೀಡಲಾಗಿದೆ. ಆತ್ಮಹತ್ಯೆಯ ಬಗ್ಗೆ ಮಾತನಾಡುವಾಗ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯವಾಗಿದೆ:
ಸಹಾಯಕವಾದ ಭಾಷೆ
- ವ್ಯಕ್ತಿ "ಆತ್ಮಹತ್ಯೆಯಿಂದ ಮರಣ ಹೊಂದಿದ್ದಾರೆ" ಎಂದು ಹೇಳಲು ಪ್ರಯತ್ನಿಸಿ ("ಆತ್ಮಹತ್ಯೆ ಮಾಡಿಕೊಳ್ಳುವ" ಬದಲಿಗೆ - ಕೆಳಗಿನ ಸಹಾಯವಿಲ್ಲದ ಭಾಷೆಯ ಉದಾಹರಣೆಗಳನ್ನು ನೋಡಿ).
- ಆತ್ಮಹತ್ಯೆಯು ಜಟಿಲವಾಗಿದೆ ಮತ್ತು ಒಬ್ಬ ವ್ಯಕ್ತಿಯು ತನ್ನ ಜೀವನವನ್ನು ಕೊನೆಗೊಳಿಸಲು ಅನೇಕ ಅಂಶಗಳು ಕಾರಣವಾಗುತ್ತವೆ ಎಂಬುದಾಗಿ ಸೂಚಿಸಿ.
- ಭರವಸೆ ಮತ್ತು ಚೇತರಿಕೆಯ ಸಂದೇಶಗಳನ್ನು ಸೇರಿಸಿ.
- ಆತ್ಮಹತ್ಯೆಯ ಕುರಿತು ಯೋಚಿಸುತ್ತಿರುವ ಇತರರಿಗೆ ಅವರು ಎಲ್ಲಿ ಮತ್ತು ಹೇಗೆ ಸಹಾಯ ಪಡೆಯಬಹುದು ಎಂಬುದರ ಕುರಿತು ತಿಳಿಸಿ.
- ಆತ್ಮಹತ್ಯೆಯಿಂದ ರಕ್ಷಿಸಲು ಸಹಾಯ ಮಾಡುವ ಅಂಶಗಳ ಮಾಹಿತಿಯನ್ನು ಸೇರಿಸಿ, ಉದಾಹರಣೆಗೆ ಅವರ ನೆಚ್ಚಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ಅವರ ಸ್ನೇಹಿತರೊಂದಿಗೆ ಸುತ್ತಾಡುವುದು.
- ಆತ್ಮಹತ್ಯೆಯನ್ನು ತಡೆಗಟ್ಟಬಹುದು, ಸಹಾಯ ಲಭ್ಯವಿದೆ, ಚಿಕಿತ್ಸೆಗಳು ಯಶಸ್ವಿಯಾಗುತ್ತವೆ ಮತ್ತು ಚೇತರಿಕೆ ಸಾಧ್ಯ ಎಂಬುದಾಗಿ ಸೂಚಿಸಿ.
- ಯುವಜನತೆಯು ತಮ್ಮ ಭಾವನೆಗಳ ಬಗ್ಗೆ ಮಾತನಾಡುವುದನ್ನು ಪ್ರೋತ್ಸಾಹಿಸಿ — ಅದು ಸ್ನೇಹಿತರು ವಿಶ್ವಾಸಾರ್ಹ ವಯಸ್ಕರು ಅಥವಾ ವೃತ್ತಿಪರರು ಆಗಿರಬಹುದು.
ಇದಕ್ಕೆ ವ್ಯತಿರಿಕ್ತವಾಗಿ, ಸಂಭಾಷಣೆಯನ್ನು ಸರಿಯಾದ ದಿಕ್ಕಿನಲ್ಲಿ ನಡೆಸದೆಯೇ ಆತ್ಮಹತ್ಯೆಯ ಬಗ್ಗೆ ಮಾತನಾಡಲು ಮಾರ್ಗಗಳಿವೆ.
ಸಹಾಯಕವಲ್ಲದ ಭಾಷೆ
- ಆತ್ಮಹತ್ಯೆಯನ್ನು ಅಪರಾಧ ಅಥವಾ ಪಾಪ ಎಂದು ವಿವರಿಸುವ ಪದಗಳನ್ನು ಬಳಸಬೇಡಿ (“ಆತ್ಮಹತ್ಯೆ ಮಾಡಿಕೊಂಡರು” ಎನ್ನುವುದಕ್ಕಿಂತ “ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ” ಎಂದು ಹೇಳಿ). ಯಾರಾದರೂ ಏನನ್ನಾದರೂ ಅನುಭವಿಸುತ್ತಿದ್ದಾರೆ ಎಂದರೆ ಅದು ತಪ್ಪು ಅಥವಾ ಸ್ವೀಕಾರಾರ್ಹವಲ್ಲ ಎಂಬುದಾಗಿ ಇದು ಸೂಚಿಸಬಹುದು ಅಥವಾ ಅವರು ಸಹಾಯಕ್ಕಾಗಿ ಕೇಳಿದರೆ ಅವರನ್ನು ತಪ್ಪಾಗಿ ನಿರ್ಣಯಿಸಲಾಗುತ್ತದೆ ಎಂದು ಯಾರಾದರೂ ಚಿಂತಿಸುವಂತೆ ಮಾಡಬಹುದು.
- ಸಮಸ್ಯೆಗಳು, ಜೀವನದ ಒತ್ತಡಗಳು ಅಥವಾ ಮಾನಸಿಕ ಆರೋಗ್ಯದ ತೊಂದರೆಗಳಿಗೆ ಆತ್ಮಹತ್ಯೆಯೇ 'ಪರಿಹಾರ' ಎಂದು ಹೇಳಬೇಡಿ.
- ಮನಮೋಹಕಗೊಳಿಸುವ, ಭಾವಪ್ರಧಾನಗೊಳಿಸುವ ಅಥವಾ ಆತ್ಮಹತ್ಯೆಯನ್ನು ಆಕರ್ಷಕವಾಗಿ ತೋರಿಸುವ ಪದಗಳನ್ನು ಬಳಸಬೇಡಿ.
- ಆತ್ಮಹತ್ಯೆಯನ್ನು ಕ್ಷುಲ್ಲಕಗೊಳಿಸುವ ಅಥವಾ ಕಡಿಮೆ ಪ್ರಮಾಣದಲ್ಲಿ ಜಟಿಲವಾಗಿದೆ ಎಂಬುದಾಗಿ ತೋರುವ ಪದಗಳನ್ನು ಬಳಸಬೇಡಿ.
- ಒಂದೇ ಘಟನೆಯನ್ನು ದೂಷಿಸಬೇಡಿ ಅಥವಾ ಆತ್ಮಹತ್ಯೆಯು ಬೆದರಿಸುವಿಕೆ ಅಥವಾ ಸಾಮಾಜಿಕ ಮಾಧ್ಯಮ ಬಳಕೆಯಂತಹ ಒಂದೇ ಕಾರಣದ ಪರಿಣಾಮವಾಗಿದೆ ಎಂಬುದಾಗಿ ಸೂಚಿಸಬೇಡಿ.
- ಕಟ್ಟುಕಥೆಗಳು, ಅಪಮಾನ, ಸ್ಟೀರಿಯೊಟೈಪ್‌ಗಳನ್ನು ಬಲಪಡಿಸುವ ಅಥವಾ ಆತ್ಮಹತ್ಯೆಯ ಬಗ್ಗೆ ಏನನ್ನೂ ಮಾಡಲಾಗುವುದಿಲ್ಲ ಎಂಬುದನ್ನು ಸೂಚಿಸುವ ನಿರ್ಣಯಾತ್ಮಕ ಪದಗುಚ್ಛಗಳನ್ನು ಬಳಸಬೇಡಿ.
- ನೈಜ ಆತ್ಮಹತ್ಯೆಯ ಅಥವಾ ಆತ್ಮಹತ್ಯೆ ಪ್ರಯತ್ನದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಬೇಡಿ.
- ಆತ್ಮಹತ್ಯೆ ವಿಧಾನಗಳು ಅಥವಾ ಆತ್ಮಹತ್ಯೆಯ ಸ್ಥಳದ ಬಗ್ಗೆ ಮಾಹಿತಿಯನ್ನು ನೀಡಬೇಡಿ.
- ಒಂದು ನಿರ್ದಿಷ್ಟ ಸ್ಥಳದಲ್ಲಿ ಅಥವಾ 'ಹಾಟ್ ಸ್ಪಾಟ್' ನಲ್ಲಿ ಹಲವಾರು ಆತ್ಮಹತ್ಯಾ ಕೃತ್ಯಗಳು ನಡೆದಿದ್ದರೆ ಅದನ್ನು ಒಪ್ಪಿಕೊಳ್ಳಬೇಡಿ.
ಸಾಮಾಜಿಕ ಮಾಧ್ಯಮದಲ್ಲಿ ಹದಿಹರೆಯದವರ ಆತ್ಮಹತ್ಯಾ ವರ್ತನೆಗಳ ಬಗ್ಗೆ ಎಚ್ಚರವಹಿಸಿ
ಆತ್ಮಹತ್ಯಾ ವರ್ತನೆಯ ಒಂದು ಎಚ್ಚರಿಕೆಯ ಸಂಕೇತವೆಂದರೆ ನಿಮ್ಮ ಹದಿಹರೆಯದವರು "ನಾನು ಕಣ್ಮರೆಯಾಗಲು ಬಯಸುತ್ತೇನೆ" ಅಥವಾ "ನಾನು ಇದನ್ನು ಕೊನೆಗೊಳಿಸಲು ಬಯಸುತ್ತೇನೆ" ಎಂದು ಹೇಳುವುದು. ಅವರು ನಿರಾಶಾದಾಯಕ ಮತ್ತು ಅಸಹಾಯಕತನವನ್ನು ಅನುಭವಿಸುತ್ತಿದ್ದೇವೆಂದು ಅವರು ಸೂಚಿಸಬಹುದು ಅಥವಾ ತಾವು ಇತರರಿಗೆ ಹೊಣೆಯಾಗಿದ್ದೇವೆಂದು ಸೂಚಿಸಬಹುದು. ಅವರು ಸಾಮಾನ್ಯವಾಗಿ ಮಾಡುವ ಸಂಗತಿಗಳಲ್ಲಿ ಆಸಕ್ತಿಯನ್ನು ಕಳೆದುಕೊಂಡಿರಬಹುದು ಅಥವಾ ಅವರು ಹಿಂದು ಮುಂದು ನೋಡದೆಯೇ ಕಾರ್ಯನಿರ್ವಹಿಸುತ್ತಿರಬಹುದು.
Orygen ಹೈಲೈಟ್ ಮಾಡಿದಂತೆ, ಯುವ ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಳ್ಳಬಹುದಾದ ಚಿಹ್ನೆಗಳು ಇವುಗಳನ್ನು ಒಳಗೊಂಡಿರಬಹುದು:
- ಅವನಿಗೆ/ಅವಳನ್ನು ನೋಯಿಸುವ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವಂತೆ ಬೆದರಿಕೆ ಹಾಕುವುದು
- ಆತ್ಮಹತ್ಯೆಯ ಮೂಲಕ ಸಾಯುವ ಮಾರ್ಗಗಳನ್ನು ಹುಡುಕುವುದು (ಉದಾ. ಮಾತ್ರೆಗಳು, ಶಸ್ತ್ರಾಸ್ತ್ರಗಳು ಅಥವಾ ಇತರ ವಿಧಾನಗಳ ಪ್ರವೇಶವನ್ನು ಹುಡುಕುವುದು)
- ಉದ್ದೇಶಪೂರ್ವಕವಾಗಿ ಅವನು/ಅವಳೇ ನೋವುಂಟುಮಾಡಿಕೊಳ್ಳುವುದು (ಅಂದರೆ ಪರಚುವುದು, ಕತ್ತರಿಸುವುದು ಅಥವಾ ಸುಡುವ ಮೂಲಕ)
- ಮರಣ, ಸಾಯುವುದು ಅಥವಾ ಆತ್ಮಹತ್ಯೆಯ ಬಗ್ಗೆ ಮಾತನಾಡುವುದು ಅಥವಾ ಬರೆಯುವುದು
- ಹತಾಶ ಪರಿಸ್ಥಿತಿ
- ಸಿಟ್ಟು, ಕೋಪ, ಸೇಡು ತೀರಿಸಿಕೊಳ್ಳುವುದು
- ಆಲೋಚಿಸದೆಯೇ ಅಜಾಗರೂಕತೆಯಿಂದ ವರ್ತಿಸುವುದು ಅಥವಾ ಅಪಾಯಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು
- ಸಿಕ್ಕಿಹಾಕಿಕೊಂಡ, ಹೊರಬರಲು ದಾರಿಯೇ ಇಲ್ಲದಂತಿರುವ ಭಾವನೆ
- ಹೆಚ್ಚುತ್ತಿರುವ ಆಲ್ಕೋಹಾಲ್ ಅಥವಾ ಮಾದಕ ದ್ರವ್ಯಗಳ ಬಳಕೆ
- ಸ್ನೇಹಿತರು, ಕುಟುಂಬ ಅಥವಾ ಸಮಾಜದಿಂದ ಹಿಮ್ಮುಖವಾಗುವುದು
- ಆತಂಕ, ತಳಮಳ, ನಿದ್ರೆ ಅಥವಾ ಹಸಿವಿನಲ್ಲಿ ಬದಲಾವಣೆಗಳು
- ಮನಸ್ಥಿತಿಯಲ್ಲಿ ನಾಟಕೀಯ ಬದಲಾವಣೆಗಳು
- ಬದುಕಲು ಯಾವುದೇ ಕಾರಣವಿಲ್ಲದಿರುವುದು, ಜೀವನದಲ್ಲಿ ಗುರಿಯಿಲ್ಲದಿರುವುದು
ಈ ನಡವಳಿಕೆಯ ಬಗ್ಗೆ ಗಮನಹರಿಸುವಾಗ, ಇವುಗಳು ಹದಿಹರೆಯದವರಿಗೆ ಆತ್ಮಹತ್ಯಾ ವರ್ತನೆಯ ಲಕ್ಷಣಗಳನ್ನು ತೋರಿಸಲು ಪೋಷಕರು, ಪಾಲಕರು ಮತ್ತು ಇತರರು ತೆಗೆದುಕೊಳ್ಳಬಹುದಾದ ಕ್ರಮಗಳಾಗಿವೆ.
ಹದಿಹರೆಯದವರಿಗೆ ಬೆಂಬಲ ನೀಡಲು ಪೋಷಕರು ತೆಗೆದುಕೊಳ್ಳಬಹುದಾದ ಕ್ರಮಗಳು:
ನಿಮ್ಮ ಹದಿಹರೆಯದವರು ಎಚ್ಚರಿಕೆ ಚಿಹ್ನೆಗಳನ್ನು ತೋರಿಸಿದ ನಂತರ ಅಥವಾ ಅವರು ನಿಮ್ಮೊಂದಿಗೆ ಮಾತನಾಡಲು ಬಯಸುತ್ತಾರೆ ಎಂದು ಹೇಳಿದ ನಂತರ ಹೇಗೆ ಪ್ರಾರಂಭಿಸಬೇಕು ಎಂದು ನೀವು ಆಲೋಚಿಸುತ್ತಿದ್ದರೆ ನೀವು ಅವರನ್ನು ಬೆಂಬಲಿಸುವ ಕೆಲವು ವಿಧಾನಗಳು ಇಲ್ಲಿವೆ. ಇದು Forefront ಮೂಲಕ ಮಾಡಿದ ಕೆಲಸದ ಮೂಲಕ ತಿಳಿಸಲಾದ ಪಟ್ಟಿಯಾಗಿದೆ: ಆತ್ಮಹತ್ಯೆ ತಡೆಗಟ್ಟುವಿಕೆಯಲ್ಲಿ ನಾವೀನ್ಯತೆ.
ಅಪಾಯಕಾರಿ ಆನ್‌ಲೈನ್ “ಸವಾಲುಗಳಿಗೆ” ಪ್ರತಿಕ್ರಿಯಿಸುವುದು
ಆನ್‌ಲೈನ್ “ಆತ್ಮಹತ್ಯೆ ಸವಾಲುಗಳು” ಅಥವಾ “ಗೇಮ್‌ಗಳು” ಸಾಮಾನ್ಯವಾಗಿ ಹಾನಿಕಾರಕ ಕಾರ್ಯಗಳ ಸರಣಿಯನ್ನು ಒಳಗೊಂಡಿರುತ್ತದೆ, ಅದು ಜನರಿಗೆ ನಿರ್ದಿಷ್ಟ ಸಮಯದ ಅವಧಿಯಲ್ಲಿ ನೀಡಲಾಗುತ್ತದೆ, ಆಗಾಗ್ಗೆ ತೀವ್ರತೆಯನ್ನು ಹೆಚ್ಚಿಸುತ್ತದೆ. ಈ ಸವಾಲುಗಳ ಕುರಿತು ಚರ್ಚಿಸುವ ವಿಷಯವು Meta ದ ನೀತಿಗಳಿಗೆ ವಿರುದ್ಧವಾಗಿದೆ. Meta ಈ ವಿಷಯವನ್ನು ತೆಗೆದುಹಾಕುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ, ನಾವು ಅದನ್ನು ಪೋಸ್ಟ್ ಮಾಡಿದ ಖಾತೆಗಳನ್ನು ಸಹ ತೆಗೆದುಹಾಕಬಹುದು.
ನಿಮ್ಮ ಹದಿಹರೆಯದವರು ಈ ರೀತಿಯ ವಿಷಯವನ್ನು ಹಂಚಿಕೊಳ್ಳುವುದನ್ನು ನೀವು ನೋಡಿದರೆ (ಅಥವಾ ಸಹಪಾಠಿಗಳು ಅದನ್ನು ಹಂಚಿಕೊಳ್ಳುವುದನ್ನು ಅವರು ನೋಡಿದ್ದಾರೆಂದು ಅವರು ನಿಮಗೆ ಹೇಳಿದರೆ), ಮುಂದೆ ಏನು ಮಾಡಬೇಕು ಎಂಬುದರ ಕುರಿತು ಕೆಲವು ಸಲಹೆಗಳು ಇಲ್ಲಿವೆ:
- ಅಪಾಯವನ್ನು ಅರ್ಥಮಾಡಿಕೊಳ್ಳಿ: ಅಪಾಯವನ್ನು ನಿರ್ಲಕ್ಷಿಸಬೇಡಿ. ಈ ವಿಷಯದ ಹರಡುವಿಕೆಯನ್ನು ತಡೆಯುವಲ್ಲಿ ಪ್ರತಿಯೊಬ್ಬರದ್ದೂ ಪಾತ್ರವಿದೆ.
- ಸಕ್ರಿಯವಾಗಿ ಆಲಿಸಿ: ಯುವ ಜನತೆಗಳು ತಾವು ಆನ್‌ಲೈನ್‌ನಲ್ಲಿ ನೋಡಿದ ವಿಷಯಗಳು ಅಥವಾ ಸ್ನೇಹಿತರು ಅಥವಾ ಇತರರು ಮಾಡಿದ ಪೋಸ್ಟ್‌ಗಳು ಅಥವಾ ಕಾಮೆಂಟ್‌ಗಳ ಬಗ್ಗೆ ಯಾವುದೇ ಕಾಳಜಿ ಅಥವಾ ಚಿಂತೆಗಳನ್ನು ವ್ಯಕ್ತಪಡಿಸಿದರೆ, ಆಲಿಸುವುದು ಮತ್ತು ಬೆಂಬಲವನ್ನು ನೀಡುವುದು ಮುಖ್ಯವಾಗಿದೆ.
- ಪರಿಣಾಮವನ್ನು ಪರಿಗಣಿಸಿ: ಆನ್‌ಲೈನ್ ಸ್ವಯಂ-ಹಾನಿ ಮತ್ತು ಆತ್ಮಹತ್ಯಾ ಸವಾಲುಗಳ ಕುರಿತು ಎಚ್ಚರಿಕೆಗಳನ್ನು ಫಾರ್ವರ್ಡ್ ಮಾಡುವುದು ಸಹ ಕೆಲವು ಜನರಿಗೆ ಪ್ರಚೋದನೆಯನ್ನು ನೀಡಬಹುದು. ಜನರು ತಿಳುವಳಿಕೆಯನ್ನು ಹೊಂದಿರುವುದು ಮುಖ್ಯವಾಗಿದೆ, ಆದರೆ ಆತ್ಮಹತ್ಯೆಯ ವಿಷಯಕ್ಕೆ ಸಂಬಂಧಿಸಿದಂತೆ ನೀವು ಏನನ್ನು ಹಂಚಿಕೊಳ್ಳುತ್ತೀರಿ ಮತ್ತು ಅದು ಇತರರ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದರ ಕುರಿತು ಗಮನವಿರಲಿ.
- ಇದನ್ನು ವರದಿಮಾಡಿ. ಸಾಮಾಜಿಕ ಮಾಧ್ಯಮ ಚಾನಲ್‌ಗಳಿಗೆ ಹಾನಿಕಾರಕ ಅಥವಾ ಸಂಕಟವನ್ನು ಉಂಟುಮಾಡುವ ಅನುಚಿತ ಆನ್‌ಲೈನ್ ವಿಷಯವನ್ನು ಯಾರಾದರೂ ವರದಿ ಮಾಡಬಹುದು. ವೇದಿಕೆಗಳು ತಮ್ಮ ನೀತಿಗಳಿಗೆ ವಿರುದ್ಧವಾದ ವಿಷಯವನ್ನು ವಿಮರ್ಶಿಸುತ್ತವೆ ಮತ್ತು ಸಂಭಾವ್ಯವಾಗಿ ತೆಗೆದುಹಾಕುತ್ತವೆ.
- ಅದರ ಕುರಿತು ಮಾತನಾಡಿ. ನೀವು ಹದಿಹರೆಯದವರನ್ನು ಹೊಂದಿದ್ದರೆ (ಅಥವಾ ಯುವ ಜನತೆಯೊಂದಿಗೆ ಕೆಲಸ ಮಾಡಿದರೆ), ಅವರು ಏನು ಮಾಡುತ್ತಿದ್ದಾರೆ ಅಥವಾ ನೋಡುತ್ತಿದ್ದಾರೆ ಎಂಬುದನ್ನು ಶೇರ್ ಮಾಡಲು ಅವರನ್ನು ಪ್ರೋತ್ಸಾಹಿಸುವ ರೀತಿಯಲ್ಲಿ ಅವರ ಆನ್‌ಲೈನ್ ಚಟುವಟಿಕೆಯ ಕುರಿತು ಅವರೊಂದಿಗೆ ಮಾತನಾಡಲು ಮಾರ್ಗಗಳನ್ನು ಕಂಡುಕೊಳ್ಳಿ. ಸವಾಲಿನ ಬಗ್ಗೆ ನೇರವಾಗಿ ಕೇಳುವುದು ಕೆಲಸ ಮಾಡದಿದ್ದರೆ, ಕಂಡುಹಿಡಿಯಲು ಹೆಚ್ಚು ಪರೋಕ್ಷ ಮಾರ್ಗಗಳನ್ನು ಪ್ರಯತ್ನಿಸಿ. ಯುವ ಜನತೆಯು ತಮ್ಮ ಹೆತ್ತವರನ್ನು ನಂಬಬಹುದು ಮತ್ತು ಪ್ರಾಮಾಣಿಕವಾಗಿರುವುದಕ್ಕಾಗಿ ಶಿಕ್ಷಿಸಲಾಗುವುದಿಲ್ಲ ಎಂಬುದು ತಿಳಿದಿರಬೇಕು.
ಸಂಪನ್ಮೂಲಗಳು
Meta ದ ತಂತ್ರಜ್ಞಾನಗಳಲ್ಲಿ ಯೋಗಕ್ಷೇಮ ಮತ್ತು ಆನ್‌ಲೈನ್ ಸುರಕ್ಷತೆಯ ಕುರಿತು ಹೆಚ್ಚುವರಿ ಆನ್‌ಲೈನ್ ಸಂಪನ್ಮೂಲಗಳಿಗಾಗಿ, ನಮ್ಮ ಆತ್ಮಹತ್ಯೆ ತಡೆಗಟ್ಟುವ ಕೇಂದ್ರ ಅಥವಾ ನಮ್ಮ ಸುರಕ್ಷತಾ ಕೇಂದ್ರಕ್ಕೆ ಭೇಟಿ ನೀಡಿ.
ನಮ್ಮ ತಂತ್ರಜ್ಞಾನಗಳನ್ನು ಬಳಸುವ ಜನರನ್ನು ಉತ್ತಮ ರೀತಿಯಲ್ಲಿ ಬೆಂಬಲಿಸಲು, ಈ ಪರಿಣಿತ ಸಂಸ್ಥೆಗಳೊಂದಿಗೆ ಇವರು Meta ಪಾಲುದಾರರಾಗಿದ್ದಾರೆ:
ಯುನೈಟೆಡ್ ಸ್ಟೇಟ್ಸ್
ರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವಿಕೆ ಲೈಫ್‌ಲೈನ್ 1-800-273-8255
ಕ್ರೈಸಿಸ್ ಟೆಕ್ಸ್ಟ್ ಲೈನ್ 741-741