ಮೇಲ್ವಿಚಾರಣಾ ಪರಿಕರಗಳನ್ನು ಬಳಸಲು ನೀವು ಆ್ಯಪ್ನ ಇತ್ತೀಚಿನ ಆವೃತ್ತಿಯನ್ನು ಡೌನ್ಲೋಡ್ ಮಾಡಿರುವಿರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
ನಿಮ್ಮ ಹದಿಹರೆಯದವರು ಆನ್ಲೈನ್ನಲ್ಲಿ ತಮ್ಮ ಸೃಜನಶೀಲತೆಯನ್ನು ಬೆಳೆಸಿಕೊಳ್ಳಲು, ಸಂಪರ್ಕಿಸಲು ಮತ್ತು ವ್ಯಕ್ತಪಡಿಸಲು ಮುಂದುವರಿದಾಗ ಅವರಿಗೆ ಧನಾತ್ಮಕ Instagram ಪರಿಸರವನ್ನು ಹೇಗೆ ಉತ್ತಮವಾಗಿ ಬೆಂಬಲಿಸುವುದು ಎಂಬುದನ್ನು ತಿಳಿಯಿರಿ.
ನಿಮ್ಮ ಹದಿಹರೆಯದವರಿಗೆ ಹೆಚ್ಚು ಧನಾತ್ಮಕ ಮತ್ತು ಉದ್ದೇಶಪೂರ್ವಕ ಆನ್ಲೈನ್ ಅನುಭವಗಳನ್ನು ಬೆಳೆಸಲು ನಿಮಗೆ ಸಹಾಯ ಮಾಡುವ ಸಂಪನ್ಮೂಲಗಳನ್ನು ಅನ್ವೇಷಿಸಿ.
Instagram ನಲ್ಲಿ ಮೇಲ್ವಿಚಾರಣೆಗೆ ಹೋಗಿInstagram ನಲ್ಲಿ ಮೇಲ್ವಿಚಾರಣೆಯನ್ನು ಹೊಂದಿಸುವುದು ಕೇವಲ ಒಂದು ಆಹ್ವಾನದಿಂದ ಪ್ರಾರಂಭವಾಗುತ್ತದೆ. ಹದಿಹರೆಯದವರು ತಮ್ಮ ಖಾತೆಯನ್ನು ಮೇಲ್ವಿಚಾರಣೆ ಮಾಡಲು ಪೋಷಕರನ್ನು ಆಹ್ವಾನಿಸಬಹುದು ಮತ್ತು ಮೇಲ್ವಿಚಾರಣೆಗೆ ದಾಖಲಾಗಲು ಪೋಷಕರು ತಮ್ಮ ಹದಿಹರೆಯದವರನ್ನು ಆಹ್ವಾನಿಸಬಹುದು. ಎರಡೂ ವ್ಯಕ್ತಿಗಳು ಅವರ ಆಹ್ವಾನಗಳನ್ನು ಸಮ್ಮತಿಸಬೇಕು ಮತ್ತು ಮೇಲ್ವಿಚಾರಣೆಯನ್ನು ಪ್ರಾರಂಭಿಸಲು ಹದಿಹರೆಯದವರು ತಮ್ಮ ಪೋಷಕರ ಗುರುತನ್ನು ದೃಢೀಕರಿಸಬೇಕು. Instagram ಆ್ಯಪ್ ಸೆಟ್ಟಿಂಗ್ಗಳಿಗೆ ಹೋಗಿ ಮತ್ತು ಮೇಲ್ವಿಚಾರಣೆಯನ್ನು ಕ್ಲಿಕ್ ಮಾಡುವ ಮೂಲಕ ಪ್ರಾರಂಭಿಸಿ.
ಮೇಲ್ವಿಚಾರಣೆಯೊಂದಿಗೆ, ಹದಿಹರೆಯದವರು Instagram ನಲ್ಲಿ ಎಷ್ಟು ಸಮಯವನ್ನು ಕಳೆಯಬೇಕು ಎಂಬುದರ ಕುರಿತು ಪೋಷಕರು ಮತ್ತು ಹದಿಹರೆಯದವರು ಸಂಭಾಷಣೆಯನ್ನು ಪ್ರಾರಂಭಿಸಬಹುದು. ದೈನಂದಿನ ಸಮಯದ ಮಿತಿಯನ್ನು ಹೊಂದಿಸುವುದರಿಂದ ಹದಿಹರೆಯದವರು ಎಲ್ಲಾ ಸಾಧನಗಳಲ್ಲಿ ದಿನಕ್ಕೆ Instagram ಆ್ಯಪ್ನಲ್ಲಿ ಕಳೆಯಬಹುದಾದ ಒಟ್ಟು ಸಮಯವನ್ನು ನಿರ್ಬಂಧಿಸುತ್ತದೆ.
ದೈನಂದಿನ ಸಮಯದ ಮಿತಿಗಳನ್ನು ಹೊಂದಿಸುವುದರ ಜೊತೆಗೆ ಮೇಲ್ವಿಚಾರಣೆಯೊಂದಿಗೆ ದಿನದ ನಿರ್ದಿಷ್ಟ ಗಂಟೆಗಳಲ್ಲಿ (ಉದಾ. ಶಾಲಾ ಸಮಯ, ಭೋಜನದ ಸಮಯ) ನಿಗದಿತ ವಿರಾಮಗಳನ್ನು ನೀವು ಹೊಂದಿಸಬಹುದು. ಈ ನಿಗದಿತ ವಿರಾಮಗಳು ನೀವು ಆಯ್ಕೆ ಮಾಡುವ ನಿರ್ದಿಷ್ಟ ಸಮಯದಲ್ಲಿ Instagram ಗೆ ನಿಮ್ಮ ಹದಿಹರೆಯದವರ ಪ್ರವೇಶವನ್ನು ನಿರ್ಬಂಧಿಸುತ್ತವೆ.
Instagram ನಲ್ಲಿ ನೀವು ಮೇಲ್ವಿಚಾರಣೆ ಮಾಡುತ್ತಿರುವ ಹದಿಹರೆಯದವರು ಏನನ್ನಾದರೂ ವರದಿ ಮಾಡಿದರೆ,ಅದರ ಕುರಿತು ನಿಮಗೆ ತಿಳಿಸುವ ಆಯ್ಕೆಯನ್ನು ಅವರು ಹೊಂದಿರುತ್ತಾರೆ. ಅವರು ನಿಮಗೆ ತಿಳಿಸಲು ನಿರ್ಧರಿಸಿದರೆ, ನಿಮ್ಮ ಹದಿಹರೆಯದವರು ವರದಿ ಮಾಡಿದ್ದಾರೆ ಮತ್ತು ಅವರು ಆಯ್ಕೆ ಮಾಡಿದ ವರದಿಯ ವರ್ಗ ಮತ್ತು ಅವರು ವರದಿ ಮಾಡಿದ ಖಾತೆಯನ್ನು ನಿಮಗೆ ತಿಳಿಸಲಾಗುತ್ತದೆ. ಸಂವಾದ ಮಾರ್ಗದರ್ಶಿಗಳು ಮತ್ತು ಸಂಪನ್ಮೂಲಗಳಿಗಾಗಿ ನೀವು ಶಿಕ್ಷಣ ಕೇಂದ್ರಕ್ಕೆ ಭೇಟಿ ನೀಡಬಹುದು ಅಥವಾ ಹೆಚ್ಚುವರಿ ಕ್ರಮಗಳನ್ನು ಹೇಗೆ ತೆಗೆದುಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಸುರಕ್ಷತಾ ಕೇಂದ್ರಕ್ಕೆ ಭೇಟಿ ನೀಡಬಹುದು.
ಕುಟುಂಬ ಕೇಂದ್ರದ ಡ್ಯಾಶ್ಬೋರ್ಡ್ನಲ್ಲಿ ಖಾತೆ ಗೌಪ್ಯತೆ, ಸೂಕ್ಷ್ಮ ವಿಷಯ ಮತ್ತು ಸಂದೇಶ ಕಳುಹಿಸುವಿಕೆಗೆ ಸಂಬಂಧಿಸಿದ ಅವರ ಹದಿಹರೆಯದ ಕೆಲವು ಸೆಟ್ಟಿಂಗ್ಗಳನ್ನು ವೀಕ್ಷಿಸಲು ಪೋಷಕರು ಮೇಲ್ವಿಚಾರಣೆಯನ್ನು ಬಳಸಬಹುದು. ಹೆಚ್ಚುವರಿಯಾಗಿ, ಈ ಸೆಟ್ಟಿಂಗ್ಗಳಲ್ಲಿ ಯಾವುದಾದರೂ ಬದಲಾವಣೆಯಾದರೆ, ಪುಶ್ ಅಧಿಸೂಚನೆಗಳನ್ನು ಸಕ್ರಿಯಗೊಳಿಸಿದರೆ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಎಚ್ಚರಿಸುವ ಅಧಿಸೂಚನೆಯನ್ನು ಪೋಷಕರು ಸ್ವೀಕರಿಸುತ್ತಾರೆ.