ಸಾಕ್ಷ್ಯವನ್ನು ಸಂಗ್ರಹಿಸಿ
ಏನಾಯಿತು ಮತ್ತು ಯಾರು ಭಾಗಿಯಾಗಿದ್ದರು ಎಂಬುದರ ಕುರಿತು ಸಾಧ್ಯವಾದಷ್ಟು ಮಾಹಿತಿಯನ್ನು ನೀವು ಸಂಗ್ರಹಿಸಿ. ಅನೇಕ ಸಂದರ್ಭಗಳಲ್ಲಿ ನಿಮ್ಮ ಟೀನ್ ಅನಾಮಧೇಯ ಪರಿಸರದಲ್ಲಿ ಅಥವಾ ಪರಿಚಯವಿಲ್ಲದ ಪರದೆಯ ಹೆಸರನ್ನು ಒಳಗೊಂಡಿದ್ದರೂ ಸಹ, ಬೆದರಿಸುವಿಕೆಯನ್ನು ಯಾರು ಮಾಡುತ್ತಿದ್ದಾರೆಂದು ತಿಳಿದುಕೊಳ್ಳುತ್ತಾರೆ (ಅಥವಾ ಕನಿಷ್ಠ ಅವರು ಯೋಚಿಸಿದರೆ ತಿಳಿಯುತ್ತಾರೆ). ಸಾಮಾನ್ಯವಾಗಿ ದುರ್ವರ್ತನೆಯು ಶಾಲೆಯಲ್ಲಿ ನಡೆಯುತ್ತಿರುವ ಯಾವುದೋ ವಿಷಯಕ್ಕೆ ಸಂಬಂಧಿಸಿರುತ್ತದೆ. ಹಾಗಾದಲ್ಲಿ, ನಿಮ್ಮ ಕಾಳಜಿಯೊಂದಿಗೆ ಅಲ್ಲಿನ ನಿರ್ವಾಹಕರನ್ನು ಸಂಪರ್ಕಿಸಿ ಮತ್ತು ಶಾಲಾ ನೀತಿಯ ಅಗತ್ಯತೆಗಳಿಗೆ ಅನುಗುಣವಾಗಿ ಘಟನೆಯ ವರದಿ ಮತ್ತು ತನಿಖೆಯನ್ನು ಪ್ರಾರಂಭಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ. ಸಂವಾದಗಳು, ಸಂದೇಶಗಳು, ಚಿತ್ರಗಳು, ವೀಡಿಯೊಗಳು ಮತ್ತು ನಿಮ್ಮ ಟೀನ್ ಸೈಬರ್ ಬೆದರಿಸುವಿಕೆಗೆ ಒಳಗಾಗುತ್ತಿದ್ದಾರೆ ಎಂಬುದಕ್ಕೆ ಪುರಾವೆಯಾಗಿ ಕಾರ್ಯನಿರ್ವಹಿಸುವ ಯಾವುದೇ ಇತರ ಐಟಂಗಳ ಸ್ಕ್ರೀನ್‌ಶಾಟ್‌ಗಳು ಅಥವಾ ಸ್ಕ್ರೀನ್ ರೆಕಾರ್ಡಿಂಗ್‌ಗಳನ್ನು ಮಾಡಿ ಮತ್ತು ಅವುಗಳನ್ನು ಪುರಾವೆಯಾಗಿ ಸಲ್ಲಿಸಿ. ತನಿಖಾ ಪ್ರಕ್ರಿಯೆಯಲ್ಲಿ ನೆರವಾಗಲು ಎಲ್ಲಾ ಘಟನೆಗಳ ದಾಖಲೆಯನ್ನು ಇರಿಸಿ. ಅಲ್ಲದೆ, ಘಟನೆಯು ಯಾವಾಗ ಮತ್ತು ಎಲ್ಲಿ ಸಂಭವಿಸಿತು (ಶಾಲೆಯಲ್ಲಿ, ನಿರ್ದಿಷ್ಟ ಆ್ಯಪ್‌ಗಳಲ್ಲಿ), ಹಾಗೆಯೇ ಯಾರು ಭಾಗಿಯಾಗಿದ್ದಾರೆ (ಆಕ್ರಮಣಕಾರರು ಅಥವಾ ಸಾಕ್ಷಿಗಳಾಗಿ) ಮುಂತಾದ ಸಂಬಂಧಿತ ವಿವರಗಳ ಕುರಿತು ಟಿಪ್ಪಣಿಗಳನ್ನು ಇರಿಸಿ.