ಒಬ್ಬ ಮನಶ್ಶಾಸ್ತ್ರಜ್ಞ ಮತ್ತು ಶೈಕ್ಷಣಿಕ ವ್ಯಕ್ತಿಯಾಗಿ, ಪೋಷಕರು ಸಾಮಾಜಿಕ ಮಾಧ್ಯಮವನ್ನು ಸಕಾರಾತ್ಮಕ ರೀತಿಯಲ್ಲಿ ಬಳಸಲು ಟೀನ್ಸ್‌ಗೆ ಹೇಗೆ ಮಾರ್ಗದರ್ಶನ ನೀಡಬಹುದು ಎಂಬುದನ್ನು ಅಧ್ಯಯನ ಮಾಡುವವನಾಗಿ, ನಿಮ್ಮಲ್ಲಿ ಅನೇಕರು ಅನುಭವಿಸುವ ಸವಾಲುಗಳನ್ನು ನಾನು ಆಲಿಸಿದ್ದೇನೆ. ನಿಮ್ಮ ಟೀನ್ ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿಸುವುದು ಮತ್ತು ಆ್ಯಪ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ ನಿರಂತರ ಬದಲಾವಣೆಗಳನ್ನು ಮುಂದುವರಿಸಲು ಪ್ರಯತ್ನಿಸುವುದರ ನಡುವೆ ಅದು ಕಷ್ಟಕರವೆನಿಸಬಹುದು. ಅದಕ್ಕಾಗಿಯೇ Instagram ಟೀನ್ ಖಾತೆಗಳಿಗಾಗಿ ಹೊಸ ಸೆಟ್ಟಿಂಗ್‌ಗಳನ್ನು ಹೊರತಂದಿದೆ, ಅದು ಬಳಸಲು ಸುಲಭವಾಗಿದೆ, ವಿಭಿನ್ನ ಕುಟುಂಬ ಅಗತ್ಯಗಳಿಗೆ ಹೆಚ್ಚು ಹೊಂದಿಕೊಳ್ಳುತ್ತದೆ ಮತ್ತು ಬಲವಾದ ರಕ್ಷಣೆಯನ್ನು ನೀಡುತ್ತದೆ.
ತಮ್ಮ ಟೀನ್ಸ್ ಸಾಮಾಜಿಕ ಮಾಧ್ಯಮದಲ್ಲಿ ನೋಡುವ ಕಂಟೆಂಟ್ ನಿಜವಾಗಿಯೂ ವಯಸ್ಸಿಗೆ ಸೂಕ್ತವಾಗಿರುವುದೇ ಎಂದು ಪೋಷಕರು ಚಿಂತಿಸಬಹುದು ಮತ್ತು ಕೆಲವೊಮ್ಮೆ ಅಸ್ತಿತ್ವದಲ್ಲಿರುವ ಪೋಷಕರ ನಿಯಂತ್ರಣಗಳು ಗೊಂದಲಮಯ ಅಥವಾ ಸೀಮಿತವಾಗಿದೆಯೇ ಎಂಬುದಾಗಿ ಕಂಡುಕೊಳ್ಳಬಹುದು. Instagram ನಿಂದ ಈ ಅಪ್‌ಡೇಟ್‌ಗಳು ಟೀನ್ಸ್ ಅನ್ನು PG-13 ಚಲನಚಿತ್ರ ರೇಟಿಂಗ್‌ಗಳಿಂದ ಮಾರ್ಗದರ್ಶಿಸಲ್ಪಟ್ಟ ಅನುಭವಕ್ಕೆ ಡೀಫಾಲ್ಟ್ ಮಾಡುವ ಮೂಲಕ ಮತ್ತು ಪೋಷಕರಿಗೆ ಬಳಸಲು ಸುಲಭವಾದ ಹೆಚ್ಚುವರಿ ನಿಯಂತ್ರಣಗಳನ್ನು ನೀಡುವ ಮೂಲಕ ಆ ಎರಡೂ ಸಮಸ್ಯೆಗಳನ್ನು ಪರಿಹರಿಸಲು ಉದ್ದೇಶಿಸಲಾಗಿದೆ. ಕೆಳಗೆ, ನಿಮ್ಮ ಟೀನ್ ಜೊತೆಗೆ ಹೇಗೆ ನಡೆದುಕೊಳ್ಳಬೇಕು ಎಂಬುದರ ಕುರಿತು ಸಲಹೆಗಳ ಜೊತೆಗೆ ಪ್ರಮುಖ ಅಪ್‌ಡೇಟ್‌ಗಳನ್ನು ನೀವು ಕಾಣಬಹುದು.
ಪ್ರತಿ ಕುಟುಂಬವು ತಮ್ಮ ಟೀನ್ಸ್ ಅನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿಡಲು ಬಯಸುತ್ತಾರೆ ಆದರೆ "ಸೂಕ್ತ" ಯಾವುದು ಎಂಬುದು ಪ್ರತಿ ಟೀನ್-ಅಥವಾ ಪ್ರತಿಯೊಬ್ಬ ಒಡಹುಟ್ಟಿದವರಿಗೂ ಒಂದೇ ಆಗಿರುವುದಿಲ್ಲ ಎಂಬುದು ಪೋಷಕರಿಗೆ ತಿಳಿದಿದೆ. ಕುಟುಂಬಗಳು ತಮ್ಮದೇ ಆದ ಮೌಲ್ಯಗಳನ್ನು ಹೊಂದಿವೆ ಮತ್ತು ಟೀನ್ಸ್ ತಮ್ಮದೇ ಆದ ವೇಗದಲ್ಲಿ ಪ್ರಬುದ್ಧರಾಗುತ್ತಾರೆ. ಅದಕ್ಕಾಗಿಯೇ ಅನೇಕ ಪೋಷಕರು ತಮ್ಮ ಟೀನ್ಸ್ ನೋಡಬಹುದಾದ ಎಲ್ಲವನ್ನೂ ಕಸ್ಟಮೈಸ್ ಮಾಡಲು ಒಂದೇ ರೀತಿಯ ನಿಯಂತ್ರಣಗಳ ಬದಲಿಗೆ ಹೆಚ್ಚಿನ ಆಯ್ಕೆಗಳನ್ನು ಕೇಳಿದ್ದಾರೆ. Instagram ನ ಹೊಸ ಸೆಟ್ಟಿಂಗ್‌ಗಳನ್ನು ಅದನ್ನೇ ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ, ಪೋಷಕರು ತಮ್ಮ ಟೀನ್ ಜೊತೆಗೆ ಚರ್ಚೆ ಮಾಡುವಾಗ ಹೆಚ್ಚಿನ ಆಯ್ಕೆ, ಹೆಚ್ಚಿನ ಆತ್ಮವಿಶ್ವಾಸ ಮತ್ತು ಮನಸ್ಸಿನ ಶಾಂತಿಯನ್ನು ನೀಡುತ್ತದೆ.