Miracle Pool ಆ್ಯಪ್‌ನಲ್ಲಿ MR ಅನುಭವದ ಉದಾಹರಣೆತಲ್ಲೀನಗೊಳಿಸುವ ತಂತ್ರಜ್ಞಾನವನ್ನು ಯಾವುದು ವಿಶೇಷವನ್ನಾಗಿಸುತ್ತದೆ?
ಶಕ್ತಿಯು ದೇಹ ಮತ್ತು ಮನಸ್ಸು ಎರಡನ್ನೂ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ವಿಧಾನದಲ್ಲಿದ್ದು, ಬಳಕೆದಾರರನ್ನು ನಿಷ್ಕ್ರಿಯ ವೀಕ್ಷಕರಿಂದ ಸಕ್ರಿಯ ಪಾಲ್ಗೊಳ್ಳುವವರಾಗಿ ಪರಿವರ್ತಿಸುತ್ತದೆ.ಸಕ್ರಿಯ ಆಟ
ನಮ್ಮ Quest ‘ಸೂಪರ್ ಯೂಸರ್ಸ್’ ಜೊತೆ ಮಾತನಾಡುವಾಗ ನಾವು ಕಂಡುಕೊಂಡ ಆಸಕ್ತಿದಾಯಕ ವಿಷಯವೆಂದರೆ, ಅವರು VR ಒಂದು ವಿಭಿನ್ನ ರೀತಿಯ ‘ಸ್ಕ್ರೀನ್ ಸಮಯ’ ಎಂಬುದಾಗಿ ಹೇಗೆ ಭಾವಿಸಿದರು ಎಂದಾಗಿದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ, VR ಸಮಯವು ಸಾಮಾನ್ಯವಾಗಿ ಫ್ಲ್ಯಾಟ್ ಸ್ಕ್ರೀನ್ ಸಮಯಕ್ಕಿಂತ ಹೆಚ್ಚು ಸಕ್ರಿಯವಾಗಿರುತ್ತದೆ. VR ಖಚಿತವಾಗಿ ಇನ್ನೂ ಸ್ಕ್ರೀನ್ ಬಳಸುತ್ತಿರುವಾಗ, ನಿಮ್ಮ ದೇಹವನ್ನು ನೀವು ಅನುಭವಕ್ಕೆ ತಂದಿರುವಿರಿ ಎಂಬುದು ತುಂಬಾ ವಿಭಿನ್ನವಾಗಿ ಭಾಸವಾಗುತ್ತದೆ ಹಾಗೂ ಇದು ಸಕ್ರಿಯ ಹೊರಾಂಗಣ ಆಟಕ್ಕೆ ಹೋಲಿಕೆಯಾಗುತ್ತದೆ. ನಾವು ಮಾತನಾಡಿದ ಹಲವಾರು ಪೋಷಕರು, ಚಳಿಗಾಲದ ತಿಂಗಳುಗಳಲ್ಲಿ ಹವಾಮಾನ ಹೇಗೇ ಇದ್ದರೂ, Quest ಕುಟುಂಬವನ್ನು ಸಕ್ರಿಯವಾಗಿರುವಂತೆ ಮಾಡುತ್ತದೆ ಎಂಬುದಾಗಿ ತಿಳಿಸಿದ್ದಾರೆ.
ಪೋಷಕರ ಈ ಅವಲೋಕನವು, ಇತರ ರೀತಿಯ ಸ್ಕ್ರೀನ್ ಮಾಧ್ಯಮಗಳಿಗಿಂತ VR ಮೂಲಭೂತವಾಗಿ ಭಿನ್ನವಾಗಿದೆ ಎಂಬ ಅಂಶವನ್ನು ಸೂಚಿಸುತ್ತದೆ — ಇದು ನೀವು ಸಾಮಾನ್ಯವಾಗಿ ನೋಡುವ ವಿಷಯವಲ್ಲ, ಇದು ನೀವು ಮಾಡುವ ವಿಷಯವಾಗಿದೆ. ವರ್ಚುವಲ್ ರಿಯಾಲಿಟಿ ನಿಮ್ಮನ್ನು ಸಮತಟ್ಟಾದ ಆಯತಾಕಾರದ ಸ್ಕ್ರೀನ್ ಅನ್ನು ನೋಡುವ ಬದಲು ಒಂದು ಅನುಭವದೊಳಗೆ ತಲ್ಲೀನರಾಗಿರುವಂತೆ ಮಾಡುತ್ತದೆ. ವೆಬ್‌ಸೈಟ್‌ಗಳು ನೀವು ಭೇಟಿ ನೀಡುವ, TV ಕಾರ್ಯಕ್ರಮಗಳು ನೀವು ನೋಡುವ ಮತ್ತು ಪಾಡ್‌ಕಾಸ್ಟ್‌ಗಳು ನೀವು ಆಲಿಸುವ ವಿಷಯವಾಗಿದ್ದರೆ, Quest ನಲ್ಲಿನ ಅನುಭವವು ನೀವು ಭಾಗವಹಿಸುವ ವಿಷಯವಾಗಿರುತ್ತದೆ.
VR ಇಂದ್ರಿಯಗಳನ್ನು ಸುತ್ತುವರೆಯುವುದರಿಂದ, ಅದು ತಕ್ಷಣವೇ ಭಾಸವಾಗುತ್ತದೆ. ಒಂದು ಸ್ಥಳದ ಸಾಂಕೇತಿಕ ಪ್ರಾತಿನಿಧ್ಯವಿರುವುದಿಲ್ಲ, ಬದಲಿಗೆ ನೇರವಾಗಿ ಅಲ್ಲಿಯೇ ಇರುವ ಭಾವನೆಯಿರುತ್ತದೆ. ಈ ಪ್ರತ್ಯಕ್ಷವಾಗಿರುವಿಕೆಯು ಆಕ್ಷನ್ ಗೇಮ್‌ನಲ್ಲಿನ ಹೆಚ್ಚಿದ ಹೃದಯ ಬಡಿತದಿಂದ ಹಿಡಿದು ಮುಂಜಾನೆಯ ಕೃತಕ ಕಾಡಿನ ಶಾಂತಿಯುತ ಪ್ರಶಾಂತವಾದ ಸಮಯದಲ್ಲಿ ಕಡಿಮೆಯಾದ ರಕ್ತದೊತ್ತಡದವರೆಗೆ ಎಲ್ಲಾ ರೀತಿಯ ನಿಜವಾದ ದೈಹಿಕ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು.ಮನಸ್ಸನ್ನು ಮಾತ್ರವಲ್ಲದೆ ದೇಹವನ್ನು ಒಳಗೊಂಡಿರುತ್ತದೆ
VR ನಿಮ್ಮ ಸಂಪೂರ್ಣ ದೇಹವನ್ನು ಒಳಗೊಳ್ಳುತ್ತದೆ. ನೀವು ನಿಶ್ಚಲವಾಗಿ ಕುಳಿತಿದ್ದರೂ ಸಹ, ನಿಮ್ಮ ಮೆದುಳು ನಿಮ್ಮನ್ನು ಆ ಪರಿಸರದಲ್ಲಿ ಇರುವಂತೆ ಗ್ರಹಿಸುತ್ತದೆ. ನಮ್ಮ ‘ಸೂಪರ್ ಯೂಸರ್’ ಸಂಶೋಧನೆಯ ಪಾಲ್ಗೊಳ್ಳುವವರಲ್ಲಿ ಒಬ್ಬರು ತಿಳಿಸಿರುವ ಪ್ರಕಾರ, "ನನ್ನ ಮಗಳು 3D ಪಿಯಾನೋ ಆ್ಯಪ್ ಅನ್ನು ನುಡಿಸುತ್ತಿದ್ದರೆ, ಅವಳು ಕೀಗಳನ್ನು ಭೌತಿಕವಾಗಿ ಗಾಳಿಯ ಮಧ್ಯದಲ್ಲಿ ನೋಡುತ್ತಾಳೆ. ಪುಸ್ತಕ ಓದುವುದಕ್ಕೆ ಹೊಂದಾಣಿಕೆಯಾಗದ ರೀತಿಯಲ್ಲಿ ಅವಳ ಮನಸ್ಸು ಮತ್ತು ತೋಳುಗಳು ಆ ನಿಯೋಜನೆಯನ್ನು ನೆನಪಿರಿಸಿಕೊಳ್ಳುತ್ತವೆ" ಎಂಬುದಾಗಿ ನಮಗೆ ತಿಳಿಸಿದ್ದಾರೆ. ಮತ್ತೊಬ್ಬ ಪಾಲ್ಗೊಳ್ಳುವವರು ತಮ್ಮ ಮಗನ ಮೆಚ್ಚಿನ Quest ಆ್ಯಪ್ ಕುರಿತು ಮಾತನಾಡುತ್ತಾ, "ಇದು ಕೇವಲ ಬಟನ್‌ಗಳನ್ನು ಒತ್ತುವುದಾಗಿಲ್ಲ, ನೀವು ದೈಹಿಕವಾಗಿ ತಪ್ಪಿಸಿಕೊಳ್ಳಲು ಅಥವಾ ಅನ್ವೇಷಿಸಲು ಮುಂದಕ್ಕೆ ಹೆಜ್ಜೆ ಹಾಕುತ್ತೀರಿ" ಎಂಬುದಾಗಿ ತಿಳಿಸಿದ್ದಾರೆ.
ಈ ಎಂಬಾಡಿಮೆಂಟ್ ಹೆಚ್ಚಾಗಿ ತಲ್ಲೀನಗೊಳಿಸುವ ಅನುಭವಗಳನ್ನು ಹೆಚ್ಚು ಸ್ಮರಣೀಯವಾಗಿಸುತ್ತದೆ. ನಮ್ಮಲ್ಲಿ ಅನೇಕರು ಸ್ವತಃ ಅನುಭವಿಸಿರುವಂತೆ, ನಾವು ಮಾಡುವ ಮೂಲಕ ಕಲಿಯುತ್ತೇವೆ ಆದ್ದರಿಂದ ಶೈಕ್ಷಣಿಕ ವಿಷಯಕ್ಕೆ VR ಸೂಕ್ತವಾಗಿದೆ.
ಹಾಗಾದರೆ ಮೇಲೆ ವಿವರಿಸಿದ ಈ ಸೂಪರ್ ಪವರ್‌ಗಳು ದೈನಂದಿನ ಕುಟುಂಬ ಜೀವನದಲ್ಲಿ Meta Quest ಹೆಡ್‌ಸೆಟ್ ಕುರಿತು ಏನನ್ನು ಸೂಚಿಸುತ್ತವೆ? ಮೂಲಭೂತವಾಗಿ, VR ಹೆಡ್‌ಸೆಟ್ ಬಹಳ ಪರಿಣಾಮಕಾರಿಯಾದ ಬಹು-ಪರಿಕರವಾಗಿದ್ದು, ಇದನ್ನು ವಿವಿಧ ಪ್ರಾಯೋಗಿಕ ಉದ್ದೇಶಗಳಿಗಾಗಿ ಬಳಸಬಹುದು. ನಿಮ್ಮ ಸಾಧನವು ನಿಮ್ಮನ್ನು ಫೀಲ್ಡ್ ಟ್ರಿಪ್‌ಗೆ ಕರೆದೊಯ್ಯುವುದು, ವರ್ಚುವಲ್ ಥಿಯೇಟರ್ ಪ್ರದರ್ಶನಕ್ಕೆ ಕರೆದುಕೊಂಡು ಹೋಗುವುದರಿಂದ ಹಿಡಿದು, ಬೆಳಗಿನ ನಿಮ್ಮನ್ನು ತಕ್ಷಣ ವ್ಯಾಯಾಮಕ್ಕೆ ಕರೆದುಕೊಂಡು ಹೋಗುವವರೆಗೆ ಹಲವು ಕೆಲಸಗಳನ್ನು ಮಾಡಬಹುದಾಗಿದೆ.
ಅಂತಿಮವಾಗಿ, VR ನ ಶಕ್ತಿಯು ಅದು ದೇಹ ಮತ್ತು ಮನಸ್ಸು ಎರಡನ್ನೂ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ವಿಧಾನದಲ್ಲಿರುತ್ತದೆ. ನಿಷ್ಕ್ರಿಯ ವೀಕ್ಷಕರಿಂದ ಸಕ್ರಿಯ ಪಾಲ್ಗೊಳ್ಳುವವರವರೆಗಿನ ಪರಿವರ್ತನೆಯು ಅದನ್ನು ಅಸಾಧಾರಣವಾಗಿಸುತ್ತದೆ.