ನಿಮ್ಮ ಮಕ್ಕಳೊಂದಿಗೆ ಅವರ ಡಿಜಿಟಲ್ ವ್ಯಕ್ತಿತ್ವದ ಕುರಿತು ಸಂಭಾಷಣೆಗಳನ್ನು ಪ್ರಾರಂಭಿಸುವುದು

ನಮ್ಮ ಮಕ್ಕಳೊಂದಿಗೆ ಮುಕ್ತ ಮತ್ತು ನಿರಂತರ ಸಂಭಾಷಣೆಗಳನ್ನು ನಡೆಸುವುದು ಡಿಜಿಟಲ್ ಯೋಗಕ್ಷೇಮವನ್ನು ಅಭಿವೃದ್ಧಿಪಡಿಸುವುದರ ಅತ್ಯಗತ್ಯ ಭಾಗವಾಗಿದೆ. ಆನ್‌ಲೈನ್ ಸುರಕ್ಷತೆಯು ಆ ಸಂಭಾಷಣೆಯ ಪ್ರಮುಖ ಭಾಗವಾಗಿರಬೇಕು, ಆದರೆ ಡಿಜಿಟಲ್ ಯೋಗಕ್ಷೇಮದ ಎಲ್ಲಾ ಭಾಗಗಳನ್ನು ಒಳಗೊಳ್ಳಲು ನಾವು ಕೇವಲ ಸುರಕ್ಷತೆ ಮಾತ್ರವಲ್ಲ ನಮ್ಮ ಸಂಭಾಷಣೆಗಳನ್ನು ವಿಸ್ತರಿಸಬೇಕಾಗಿದೆ. ಇದರಲ್ಲಿ ನಮ್ಮ ಜೀವನವನ್ನು ಉತ್ಕೃಷ್ಟಗೊಳಿಸಲು ಮತ್ತು ನಮ್ಮ ಸಮುದಾಯಗಳನ್ನು ಉತ್ತಮಗೊಳಿಸಲು ನಾವು ತಂತ್ರಜ್ಞಾನವನ್ನು ಹೇಗೆ ಬಳಸಬಹುದು ಎಂಬುದರ ಕುರಿತಾದ ಸಂಭಾಷಣೆಗಳನ್ನು ನಡೆಸುವುದು ಒಳಗೊಂಡಿವೆ. ಇದು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಆರೋಗ್ಯಕರ ಸಂಬಂಧಗಳನ್ನು ನಿರ್ಮಿಸಲು ತಂತ್ರಜ್ಞಾನವನ್ನು ಬಳಸುವುದರ ಕುರಿತು ಮಾತನಾಡುವುದನ್ನು ಒಳಗೊಂಡಿರುವುದರ ಜೊತೆಗೆ ಇದರೊಂದಿಗೆ ಹೊಸ ವಿಷಯಗಳನ್ನು ಕಲಿಯಲು ಮತ್ತು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾಹಿತಿಯ ಸರಿಯಾದ ಮೂಲಗಳನ್ನು ತ್ವರಿತವಾಗಿ ಹುಡುಕಲು ಸಾಧ್ಯವಾಗುತ್ತದೆ. ಇದು ನಮ್ಮ ಆನ್‌ಲೈನ್ ಮತ್ತು ಆಫ್‌ಲೈನ್ ಚಟುವಟಿಕೆಗಳನ್ನು ಸೂಕ್ತವಾಗಿ ಸಮತೋಲನಗೊಳಿಸುವುದರ ಕುರಿತಾಗಿದೆ.

ಡಿಜಿಟಲ್ ಪೌರತ್ವ ಒಕ್ಕೂಟವು ಆರೋಗ್ಯವಂತ ಡಿಜಿಟಲ್ ನಾಗರಿಕರ 5 ಸಾಮರ್ಥ್ಯಗಳನ್ನು ಗುರುತಿಸಿದೆ ಅದನ್ನು ನಮ್ಮ ಮನೆಗಳಲ್ಲಿ ಮತ್ತು ಶಾಲೆಗಳಲ್ಲಿ ನಾವು ಕಲಿಸಬೇಕು. ಸಾಮರ್ಥ್ಯಗಳು ನಮ್ಮ ಮಕ್ಕಳು ತಮ್ಮ ತಂತ್ರಜ್ಞಾನದ ಬಳಕೆಯಲ್ಲಿ ಸಮತೋಲಿತ, ತಿಳಿವಳಿಕೆ, ಒಳಗೊಳ್ಳುವಿಕೆ, ತೊಡಗಿಸಿಕೊಳ್ಳುವಿಕೆ ಮತ್ತು ಎಚ್ಚರವಾಗಿರಲು ಕಲಿಯಲು ಸಹಾಯ ಮಾಡುವಲ್ಲಿ ಕೇಂದ್ರೀಕರಿಸುತ್ತವೆ. ನಿಮ್ಮ ಕುಟುಂಬದ ಡಿಜಿಟಲ್ ಸಂಸ್ಕೃತಿಯ ಬಗ್ಗೆ ಯೋಚಿಸುವಾಗ, ಮಕ್ಕಳು ಸಂಭಾಷಣೆಯಲ್ಲಿ ತೊಡಗಿಸಿಕೊಂಡಿರುವುದು ಮತ್ತು ಅವರ ಸ್ವಂತ ಡಿಜಿಟಲ್ ಅನುಭವಗಳನ್ನು ಪ್ರತಿಬಿಂಬಿಸುವ ಅವಕಾಶವನ್ನು ಹೊಂದಿರುವುದು ಮುಖ್ಯವಾಗಿದೆ. ಪರಿಣಾಮಕಾರಿ ಡಿಜಿಟಲ್ ನಾಗರೀಕರಾಗಿರುವುದರ ಗುಣಲಕ್ಷಣಗಳನ್ನು ರೂಢಿ ಮಾಡಿಕೊಳ್ಳುವುದು ಏಕೆ ಮುಖ್ಯ ಎಂಬುದರ ಕುರಿತು ಮಾತನಾಡಿ. ವರ್ಚುವಲ್ ಜಗತ್ತಿನಲ್ಲಿ ಅವರ ನಡವಳಿಕೆಗಳ ಆಧಾರದ ಮೇಲೆ ಅವರ ಜೀವನದಲ್ಲಿ ಮತ್ತು ಇತರರ ಜೀವನದಲ್ಲಿ ಅವರು ಮಾಡಬಹುದಾದ ವ್ಯತ್ಯಾಸವನ್ನು ನೋಡಲು ಅವರಿಗೆ ಸಹಾಯ ಮಾಡಿ.

ಕುಟುಂಬದ ತಂತ್ರಜ್ಞಾನ ಸಂಸ್ಕೃತಿಯನ್ನು ಬದಲಾಯಿಸುವುದು ಒಂದೇ ಮಾತುಕತೆಯಲ್ಲಿ ಸಂಭವಿಸುವುದಿಲ್ಲವಾದರೂ, ನಡೆಯುತ್ತಿರುವ ಸಂಭಾಷಣೆಗಳ ಮೂಲಕ ಸಂಭವಿಸುತ್ತವೆ. ನೀವು ಪ್ರಾರಂಭಿಸಲು ಸಹಾಯ ಮಾಡಲು, ನಿಮ್ಮ ಸ್ವಂತ ಸಂಭಾಷಣೆಗಳನ್ನು ಪ್ರಾರಂಭಿಸುವಲ್ಲಿ ಸಹಾಯ ಮಾಡಲು, 5 ಡಿಜಿಟಲ್ ಪೌರತ್ವ ಸಾಮರ್ಥ್ಯಗಳಿಗೆ ಒಗ್ಗೂಡಿಸಲಾದ ಕೆಲವು ಸಂಭಾಷಣೆ ಆರಂಭಕರು ಇಲ್ಲಿದ್ದಾರೆ;


ಸಮತೋಲನ

 1. ನಿಮ್ಮ ನಿರ್ದಿಷ್ಟ ಆ್ಯಪ್‌ಗಳನ್ನು ಬಳಸುವುದನ್ನು ನಿಲ್ಲಿಸಲು ನಿಮಗೆ ಕಷ್ಟವಾಗಿಸುವ ಕೆಲವು ವಿಷಯಗಳು ಯಾವುವು?
 2. ನಿರ್ದಿಷ್ಟ ಡಿಜಿಟಲ್ ಚಟುವಟಿಕೆಯು ಹೆಚ್ಚು ಮುಖ್ಯವಾದ ಇತರ ಕೆಲಸಗಳನ್ನು ಮಾಡುವುದರಿಂದ ನಿಮ್ಮನ್ನು ತಡೆಯುವ ಸಂದರ್ಭಗಳಿವೆಯೇ?
 3. ತಂತ್ರಜ್ಞಾನವನ್ನು ಬಳಸುವುದರಿಂದ ವಿರಾಮವನ್ನು ತೆಗೆದುಕೊಳ್ಳುವ ಸಮಯ ಬಂದಾಗ ನಿಮಗೆ ಹೇಗೆ ತಿಳಿಯುತ್ತದೆ?
 4. ನಮ್ಮ ದಿನದಲ್ಲಿ ಯಾವಾಗ ಸಾಧನ ಮುಕ್ತವಾಗಿರಬೇಕು?
 5. ಯಾವ ಆ್ಯಪ್‌ಗಳು ಅಥವಾ ಡಿಜಿಟಲ್ ಚಟುವಟಿಕೆಗಳು ನಿಮ್ಮ ಸಮಯಕ್ಕೆ ಅರ್ಹವಾಗಿವೆ ಎಂಬುದನ್ನು ನೀವು ಹೇಗೆ ನಿರ್ಧರಿಸುತ್ತೀರಿ?

ಮಾಹಿತಿಯುಕ್ತ

 1. ನೀವು ಇತ್ತೀಚೆಗೆ ಆನ್‌ಲೈನ್‌ನಲ್ಲಿ ಕಲಿತಿರುವ ಹೊಸ ವಿಷಯ ಯಾವುದು?
 2. ನೀವು ಹೊಸತನ್ನು ಕಲಿಯಲು ಬಯಸಿದಾಗ ಆನ್‌ಲೈನ್‌ಗೆ ಹೋಗಲು ನಿಮ್ಮ ಮೆಚ್ಚಿನ ಸ್ಥಳಗಳು ಯಾವುವು?
 3. ಆನ್‌ಲೈನ್‌ನಲ್ಲಿ ನಾವು ಕಂಡುಕೊಂಡ ಮಾಹಿತಿಯು ತಪ್ಪುದಾರಿಗೆಳೆಯುವ ಅಥವಾ ತಪ್ಪಾದಾಗ ಗುರುತಿಸದಿರುವ ಅಪಾಯಗಳು ಯಾವುವು?
 4. ಯಾರಾದರೂ ತಪ್ಪಾಗಿ ಕಂಡುಬರುವ ಮಾಹಿತಿಯನ್ನು ಶೇರ್ ಮಾಡಿದಾಗ ನೀವು ಹೇಗೆ ಪ್ರತಿಕ್ರಿಯಿಸಬಹುದು?
 5. ನೀವು ಏನನ್ನಾದರೂ ಶೇರ್ ಮಾಡಿದರೆ ನಂತರ ಅದು ನಿಜವಲ್ಲ ಎಂಬುದನ್ನು ನೀವು ಕಂಡುಕೊಂಡರೆ ಏನು ಮಾಡಬೇಕು?

ಒಳಗೊಂಡಿರುವ

 1. ನೀವು ಆನ್‌ಲೈನ್‌ನಲ್ಲಿ ಬರೆದ ಅಥವಾ ಹೇಳಿದ ಯಾವುದಕ್ಕಾದರೂ ನೀವು ಎಂದಾದರೂ ವಿಷಾದಿಸಿದ್ದೀರಾ?
 2. ನೀವು ಗೌರವಿಸುವ ಯಾರಾದರೂ ನಿಮ್ಮನ್ನು ಆನ್‌ಲೈನ್‌ನಲ್ಲಿ ನಿರಾಶೆಗೊಳಿಸುವಂತಹವುಗಳನ್ನು ಮಾಡುವುದನ್ನು ಅಥವಾ ಹೇಳುವುದನ್ನು ನೀವು ಎಂದಾದರೂ ನೋಡಿದ್ದೀರಾ?
 3. ಆನ್‌ಲೈನ್‌ನಲ್ಲಿ ಅಥವಾ ವೈಯಕ್ತಿಕವಾಗಿ ಯಾರೊಂದಿಗಾದರೂ ನಿರ್ದಯವಾಗಿ ವರ್ತಿಸುವುದು ಸುಲಭ ಎಂಬುದಾಗಿ ನೀವು ಭಾವಿಸುತ್ತೀರಾ?
 4. ನಿಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ವ್ಯಕ್ತಿಯಿಂದ ನೀವು ಏನನ್ನಾದರೂ ಕಲಿತಿರುವಿರಿ ಎಂಬುದಾಗಿ ನೀವು ಯೋಚಿಸಬಹುದೇ?
 5. ನೀವು ಎಂದಾದರೂ ಆನ್‌ಲೈನ್‌ನಲ್ಲಿ ಹೊರಗಿಡಲಾಗಿದೆ ಅಥವಾ ತಿರಸ್ಕರಿಸಲಾಗಿದೆ ಎಂಬುದಾಗಿ ಭಾವಿಸಿದ್ದೀರಾ?

ತೊಡಗಿಸಿಕೊಳ್ಳುವಿಕೆ

 1. ನೀವು ಎಂದಾದರೂ ಆನ್‌ಲೈನ್‌ನಲ್ಲಿ ಇನ್ನೊಬ್ಬ ವ್ಯಕ್ತಿಗೆ ಸಹಾಯ ಮಾಡುವ ಅವಕಾಶವನ್ನು ಕಂಡುಕೊಂಡಿದ್ದೀರಾ?
 2. ನಿಮ್ಮ ಶಾಲೆಯ ಒಂದು ಸಮಸ್ಯೆಯನ್ನು ನಿಮಗೆ ಪರಿಹರಿಸಲು ಸಾಧ್ಯವಾದರೆ, ಅದು ಯಾವುದಾಗಿರುತ್ತದೆ?
 3. ಆ ಸಮಸ್ಯೆಯನ್ನು ಪರಿಹರಿಸಲು ನಿಮಗೆ ಸಹಾಯ ಮಾಡಲು ನೀವು ತಂತ್ರಜ್ಞಾನವನ್ನು ಹೇಗೆ ಬಳಸಬಹುದು?
 4. ನೀವು ಜಗತ್ತನ್ನು ಉತ್ತಮಗೊಳಿಸುವ ಹೊಸ ಆ್ಯಪ್‌ ಅನ್ನು ಆವಿಷ್ಕರಿಸಿದರೆ, ಅದು ಏನು ಮಾಡುತ್ತದೆ?
 5. ನೀವು ಕುಟುಂಬದ ನೆನಪುಗಳು ಮತ್ತು ಸ್ಟೋರೀಸ್ ಅನ್ನು ಸೆರೆಹಿಡಿಯಲು ಸಹಾಯ ಮಾಡಲು ತಂತ್ರಜ್ಞಾನವನ್ನು ಹೇಗೆ ಬಳಸಬಹುದು?

ಎಚ್ಚರಿಕೆ

 1. ನೀವು ಆನ್‌ಲೈನ್‌ನಲ್ಲಿ ಯಾರಾದರೂ ಬೇರೊಬ್ಬರೊಂದಿಗೆ ಕೆಟ್ಟದು ಸಂಭವಿಸುವುದನ್ನು ನೋಡಿದಾಗ ನೀವು ಏನು ಮಾಡುತ್ತೀರಿ?
 2. ವೆಬ್‌ಸೈಟ್ ಅಥವಾ ಆ್ಯಪ್ ಅಸುರಕ್ಷಿತವಾಗಿರಬಹುದು ಎಂಬುದಕ್ಕೆ ಕೆಲವು ಎಚ್ಚರಿಕೆ ಚಿಹ್ನೆಗಳು ಯಾವುವು?
 3. ಯಾರಾದರೂ ನಿಮ್ಮನ್ನು ಆನ್‌ಲೈನ್‌ನಲ್ಲಿ ಮಾಡಲು ಕೇಳುತ್ತಿರುವ ವಿಷಯದಿಂದ ನೀವು ಅನಾನುಕೂಲತೆಯನ್ನು ಅನುಭವಿಸಿದರೆ ನೀವು ಏನು ಮಾಡುತ್ತೀರಿ?
 4. ನೀವು ಆನ್‌ಲೈನ್‌ನಲ್ಲಿ ಸಂಭವಿಸಿದ ಯಾವುದೋ ವಿಷಯದ ಬಗ್ಗೆ ಚಿಂತೆ ಮಾಡುತ್ತಿದ್ದರೆ ನೀವು ಯಾರೊಂದಿಗೆ ಮಾತನಾಡಲು ಆರಾಮದಾಯಕವನ್ನು ಅನುಭವಿಸುತ್ತೀರಿ?
 5. ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಲು ಕುಟುಂಬವಾಗಿ ನಾವು ಮಾಡಬೇಕಾದ ಕೆಲವು ವಿಷಯಗಳು ಯಾವುವು?
ನಿಮ್ಮ ಸ್ಥಳವನ್ನು ಆಧರಿಸಿ ವಿಷಯವನ್ನು ವೀಕ್ಷಿಸಲು ಬೇರೆ ದೇಶ ಅಥವಾ ಪ್ರದೇಶವನ್ನು ಆಯ್ಕೆ ಮಾಡಲು ನೀವು ಬಯಸುವಿರಾ?
ಬದಲಾಯಿಸಿ