ಮಾಡೆಲಿಂಗ್ ಮೂಲಕ ಯುವಜನರು ಕಲಿಯುವ ಪ್ರಮುಖ ಮಾರ್ಗಗಳಲ್ಲಿ ಇದು ಒಂದಾಗಿದೆ. ಪೋಷಕರು ಮತ್ತು ಕುಟುಂಬದ ಸದಸ್ಯರ ಕ್ರಮಗಳು ಮತ್ತು ನಡವಳಿಕೆಗಳು ಹದಿಹರೆಯದವರು ತಮ್ಮ ಸುತ್ತಲಿನ ಪ್ರಪಂಚದೊಂದಿಗೆ ಹೇಗೆ ತೊಡಗಿಸಿಕೊಳ್ಳಬೇಕು ಎಂಬ ಕುರಿತು ಕಲಿಯಲು ಪ್ರಮುಖವಾಗಿವೆ. ಭೌತಿಕ ಪ್ರಪಂಚದಲ್ಲಿ, ನಾವು ಹಲವು ಮಾರ್ಗಗಳಲ್ಲಿ ಪರಿಣಾಮಕಾರಿ ನಡವಳಿಕೆಯನ್ನು ರೂಪಿಸುತ್ತೇವೆ. ಉದಾಹರಣೆಗೆ, ಉದ್ಯಾನವನಕ್ಕೆ ಹೋದಾಗ ನಾವು ನೆಲದ ಮೇಲೆ ಬಿದ್ದಿರುವ ಕಸವನ್ನು ತೆಗೆದುಕೊಂಡು ಅದನ್ನು ಎಸೆಯುವ ಒಂದು ಅವಕಾಶವನ್ನು ಕಂಡುಕೊಳ್ಳಬಹುದು. ನಾವು ಏನನ್ನೂ ಹೇಳದಿದ್ದರೂ, ನಮ್ಮ ಮಾಡೆಲಿಂಗ್ ಒಂದು ಮುಖ್ಯವಾದ ಪಾಠವನ್ನು ಕಲಿಸುತ್ತದೆ, ಅದು ನಮ್ಮ ಕಸವಲ್ಲದಿದ್ದರೂ ಅದನ್ನು ಸ್ವಚ್ಛಗೊಳಿಸುವ ಮೂಲಕ ಹಂಚಿಕೊಳ್ಳುವ ಸ್ಥಳವನ್ನು ಉತ್ತಮವಾಗಿಸುವ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳಬೇಕು.
ಪರಿಣಾಮಕಾರಿ ನಡವಳಿಕೆಯನ್ನು ರೂಪಿಸುವಿಕೆಯು ಡಿಜಿಟಲ್ ಪ್ರಪಂಚದಲ್ಲಿ ನಿರ್ಣಾಯಕವಾಗಿದೆ. ಪೋಷಕರಾಗಿ, ನಿಮ್ಮ ಹದಿಹರೆಯದವರಿಗೆ ಮಾದರಿಯಾಗಲು ಮೌಲ್ಯಯುತವಾಗಿರಬಹುದಾದ ರೀತಿಯಲ್ಲಿ ನೀವು ಈಗಾಗಲೇ ತಂತ್ರಜ್ಞಾನವನ್ನು ಬಳಸುತ್ತಿರುವ ಸಾಧ್ಯತೆಯಿದೆ. ನೀವು Facebook ನಲ್ಲಿ ಅನುಸರಿಸುವ ಸ್ಥಳೀಯ ಆಹಾರ ಬ್ಯಾಂಕ್‌ಗೆ ದೇಣಿಗೆಗಳ ಅಗತ್ಯವಿದೆ ಎಂಬುದನ್ನು ಗಮನಿಸುವುದು ಹಾಗೂ ನಿಮ್ಮನ್ನು ಅನುಸರಿಸುವವರನ್ನು ಕೊಡುಗೆ ನೀಡಲು ನಿಮ್ಮೊಂದಿಗೆ ಸೇರ್ಪಡೆಗೊಳ್ಳಲು ಪ್ರೋತ್ಸಾಹಿಸುವ ಸಂದೇಶವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವುದನ್ನು ಇದು ಒಳಗೊಂಡಿರಬಹುದು. ಅಥವಾ ನ್ಯಾಯಯುತವಾಗಿ ನಡೆಸಿಕೊಳ್ಳದವರ ಪರವಾಗಿ ನೀವು ಧ್ವನಿ ಎತ್ತಿದ ಮತ್ತು ಅದೇ ರೀತಿ ಮಾಡಲು ಇತರರನ್ನು ಪ್ರೋತ್ಸಾಹಿಸಿದ ಅನುಭವದ ಕುರಿತು ಪೋಸ್ಟ್ ಮಾಡಬಹುದು.
ಆದರೆ ಪರಿಣಾಮಕಾರಿ ಡಿಜಿಟಲ್ ನಡವಳಿಕೆಗಳನ್ನು ರೂಪಿಸಲು ಹೆಚ್ಚುವರಿ ಸವಾಲುಗಳಿವೆ. ಪೋಷಕರು ಕಂಪ್ಯೂಟರ್ ಅನ್ನು ಬಳಸುತ್ತಿರುವಾಗ ವೀಕ್ಷಿಸುವ ಮಗುವಿಗೆ, ಕಸವನ್ನು ಎತ್ತಿಕೊಳ್ಳುವುದು ಅಥವಾ ದಿನಸಿ ಸಾಮಾನುಗಳನ್ನು ಹಿಡಿದುಕೊಂಡಿರುವ ಯಾರಿಗಾದರೂ ಬಾಗಿಲನ್ನು ತೆರೆಯುವಂತಹ ಕ್ರಿಯೆಗಳು ಒಂದೇ ರೀತಿಯಾಗಿ ಕಾಣುತ್ತವೆ. ನಾವು ಇಮೇಲ್ ಪರಿಶೀಲಿಸುತ್ತಿರಲಿ, ಗೇಮ್ ಆಡುತ್ತಿರಲಿ ಅಥವಾ ಆನ್‌ಲೈನ್‌ನಲ್ಲಿ ಸೇವಾ ಕಾರ್ಯಗಳನ್ನು ಮಾಡುತ್ತಿರಲಿ, ಗಮನಿಸುತ್ತಿರುವವರಿಗೆ ನಾವು ಕೇವಲ ಕಂಪ್ಯೂಟರ್ ಎದುರು ಕುಳಿತಿರುತ್ತೇವೆ. ಇದು ಉತ್ತಮ ಡಿಜಿಟಲ್ ನಡವಳಿಕೆಯನ್ನು ರೂಪಿಸಲು ಉಪಯುಕ್ತವಾಗಿಲ್ಲದಿರಬಹುದು.
ಉತ್ತಮ ಡಿಜಿಟಲ್ ನಡವಳಿಕೆಯನ್ನು ರೂಪಿಸಲು ಬಹಿರಂಗವಾಗಿರುವುದನ್ನು ಕಲಿಯುವುದು ಒಂದು ಸರಳ ಪರಿಹಾರವಾಗಿದೆ. ಉದಾಹರಣೆಗೆ ನಾವು ಆನ್‌ಲೈನ್‌ನಲ್ಲಿ ಯಾರಿಗಾದರೂ ಸಹಾಯ ಮಾಡುತ್ತಿರುವಾಗ ನಮ್ಮ ಮಕ್ಕಳಿಗೆ ನಾವು ಏನು ಮಾಡುತ್ತಿದ್ದೇವೆ ಎಂಬುದನ್ನು ತಿಳಿಸಲು ಒಂದು ಕ್ಷಣವನ್ನು ತೆಗೆದುಕೊಳ್ಳಬಹುದು; “ನಾನು ಈಗಲೇ ಬರುತ್ತಿದ್ದೇನೆ, ನೆರೆಯವರಿಗೆ ನಾಳೆ ವೈದ್ಯರ ಅಪಾಯಿಂಟ್‌ಮೆಂಟ್ ಪಡೆದುಕೊಳ್ಳಲು ಸಹಾಯ ಮಾಡಲು ನಾನು ಅವರಿಗೆ ಪ್ರಯಾಣದ ವ್ಯವಸ್ಥೆಯನ್ನು ಏರ್ಪಡಿಸುತ್ತಿದ್ದೇನೆ”. ಸಾಧ್ಯವಿರುವಾಗ, ನಮ್ಮ ಡಿಜಿಟಲ್ ದಯೆಯ ಕಾರ್ಯಗಳು ಮತ್ತು ಸೇವೆಯಲ್ಲಿ ನಾವು ಅವರನ್ನೂ ಸಹ ತೊಡಗಿಸಿಕೊಳ್ಳಬಹುದು; “ಮುಂದಿನ ವಾರ ಬ್ಲಡ್ ಡ್ರೈವ್ ಅನ್ನು ಪ್ರಚಾರ ಮಾಡಲು ನಾನು Facebook ನಲ್ಲಿ ಆಹ್ವಾನವನ್ನು ಪೋಸ್ಟ್ ಮಾಡುತ್ತಿದ್ದೇನೆ - ಅದು ಹೇಗೆ ಗೋಚರಿಸುತ್ತದೆ?” ನಮ್ಮ ಡಿಜಿಟಲ್ ದಯೆಯ ಕಾರ್ಯಗಳನ್ನು ಬಹಿರಂಗಪಡಿಸುವಿಕೆಯು ಈ ನಡವಳಿಕೆಗಳನ್ನು ನಮ್ಮ ಹದಿಹರೆಯದವರು ಈಗ ಮತ್ತು ಭವಿಷ್ಯದಲ್ಲಿ ಡಿಜಿಟಲ್ ಸ್ಥಳಗಳಲ್ಲಿರುವ ಜನರ ಪ್ರಕಾರವನ್ನು ರೂಪಿಸಲು ಮತ್ತು ವ್ಯಾಖ್ಯಾನಿಸಲು ಸಹಾಯ ಮಾಡುವ ರೀತಿಯಲ್ಲಿ ರೂಪಿಸುತ್ತದೆ.